“ಜನಮಿತ್ರ” ಇದು ಸಾರ್ವಜನಿಕ ಅಹವಾಲು ನಿವಾರಣಾ ಪದ್ಧತಿ. ಇದರಲ್ಲಿ ಸಾರ್ವಜನಿಕರು ತಮ್ಮ ಅಹವಾಲನ್ನು ಸಲ್ಲಿಸಲು ಬಹುಮುಖ ಆಯ್ಕೆಗಳನ್ನು ನೀಡಲಾಗಿದೆ. ಸಹಾಯವಾಣಿ (ಕರೆಗಳ ಮೂಲಕ) ಮುಖಾಂತರ ಪ್ರತ್ಯುತ್ತರವನ್ನು ಒದಗಿಸುತ್ತದೆ ಅಥವಾ ಅಂತರ್ಜಾಲ ಅಥವಾ ಅವರ ಮೊಬೈಲ್ ಗಳು ಅಥವಾ ಅಂಚೆ ಮೂಲಕವೂ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ

ಅಹವಾಲುಗಳನ್ನು ಈ ಕೆಳಗಿನ ಯಾವುದೇ ಮಾಧ್ಯಮದ ಮೂಖಾಂತರ ಸಲ್ಲಿಸಬಹುದಾಗಿದೆ:
    1) ದೂರವಾಣಿಜನಮಿತ್ರ ಸಾರ್ವಜನಿಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರನ್ನು ಸಲ್ಲಿಸಬಹುದು. ದೂರನ್ನು ನೊಂದಾಯಿಸಲು ಸಾರ್ವಜನಿಕರು ತಮ್ಮ ಬಗೆಗಿನ ಮಾಹಿತಿ ನೀಡಬೇಕು.
    2) ಅಂತರ್ಜಾಲ: ಅವಶ್ಯ ದಾಖಲೆಗಳು, ಛಾಯಾಚಿತ್ರಗಳು ಮತ್ತು ಇತರ ದಾಖಲೆಗಳೊಂದಿಗೆ ಈ ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ದೂರನ್ನು ಸಲ್ಲಿಸಬಹುದು. ಅಂತರ್ಜಾಲದ ಮುಖಾಂತರ ದೂರು ನೀಡುವಾಗ ಆನ್ ಲೈನ್ ನೊಂದಣಿ ಅಗತ್ಯವಿರುತ್ತದೆ.
    3) ಮೊಬೈಲ್: ಜಿಪಿಆರ್ ಎಸ್ ಅಥವಾ 3 ಜಿ ಮೊಬೈಲ್ ಬಳಸಿಕೊಂಡು ದೂರು ದಾಖಲಿಸಬಹುದು. ಮೊಬೈಲ್ ನೊಂದಣಿಯಾದ ನಂತರ ಮೊಬೈಲ್ ತಂತ್ರಾಂಶ ಅಳವಡಿಸಿಕೊಂಡ ನಂತರ ದೂರನ್ನು ದಾಖಲಿಸಬಹುದು. ದೂರನ್ನು ಮೊಬೈಲ್ ದೂರವಾಣಿಯಲ್ಲಿ ತಂತ್ರಾಂಶವನ್ನು ಬಳಸಿಕೊಂಡು ಸಂಗ್ರಹಿಸಲಾದ ಬೆಂಬಲಿತ ಛಾಯಾಚಿತ್ರಗಳು ಧ್ವನಿ, ವೀಡಿಯೋ ಅಥವಾ ಮೊಬೈಲ್ ಪಥ್ಯಗಳ ಸಮೇತ ದಾಖಲಿಸಬಹುದಾಗಿದೆ.
    4) ಅಂಚೆ: ಜನಮಿತ್ರ ನಾಗರೀಕ ರಕ್ಷಣೆ ಸಹಾಯವಾಣಿ’ ಗೆ ಅಂಚೆ ಮೂಲಕವೂ ಅಹವಾಲು ಸಲ್ಲಿಸಬಹುದು. ನೊಂದಣಿಗೆ ಕೆಲವು ಅಗತ್ಯ ಮಾಹಿತಿಗಳನ್ನು ನೀಡಬೇಕಾಗಿರುತ್ತದೆ

ಲಾಗಿನ್

ಜನಮಿತ್ರ ಕೆಲವು ಪ್ರಮುಖ ಉಪಯೋಗಗಳು:

. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಧವಾದ ದೂರು ಅಥವಾ ಪ್ರತಿಕ್ರಿಯೆ ಸಲ್ಲಿಸುವ ಒಂದೇ ವೇದಿಕೆ “ಜನಮಿತ್ರ”. ಸಾರ್ವಜನಿಕರು ತಮ್ಮ ಅಹವಾಲು ಅಥವಾ ದೂರುಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಬಹುವಿಧ ವಾಹಿನಿಯ ಮೂಲಕ ಸಲ್ಲಿಸಬಹುದು

. ಮೊಬೈಲ್ ಅಥವಾ ಅಂತರ್ಜಾಲದ ಮೂಲಕ ಅರ್ಜಿ ಸಲ್ಲಿಸುವವರು, ದೂರುಗಳೊಂದಿಗೆ ಹೆಚ್ಚುವರಿಯಾಗಿ ಧ್ವನಿ, ಚಿತ್ರ, ಛಾಯಾಚಿತ್ರ, ಸಾಕ್ಷ್ಯಚಿತ್ರದಂತಹಾ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು

. ಅಂತರ್ಜಾಲದ ಮೂಲಕ ಆನ್ ಲೈನ್ ಅರ್ಜಿಯನ್ನು ಭರ್ತಿ ಮಾಡಿ ವಿವರಗಳನ್ನು ನೀಡಿ ದೂರುಗಳನ್ನು ದಾಖಲಿಸಬಹುದು. ಸಮಗ್ರ ದೂರು ಸಂವಹನದೊಂದಿಗೆ ದೂರಿನ ಸ್ಥಿತಿಗಳು ಮತ್ತು ಕ್ರಮಗಳ ಮೇಲಿನ ಸೂಚನೆಗಳನ್ನು ಒದಗಿಸಲಾಗುತ್ತದೆ

. ಅಂತರ್ಜಾಲ ಮತ್ತು ಮೊಬೈಲ್ ದೂರು ಪದ್ಧತಿಯಿಂದಾಗಿ ದಿನದ 24 ಗಂಟೆಗಳಲ್ಲೂ ದೂರು ಸಲ್ಲಿಸಬಹುದಾಗಿದೆ. ಕರೆಗಾಗಿ ಕಾಯಬೇಕಾದ ಅಗತ್ಯವಿಲ್ಲ

. ದೂರು ಪ್ರಕ್ರಿಯೆಯನ್ನು ಸಂಪೂರ್ಣ ಆನ್ ಲೈನ್, ಡಿಜಿಟಲ್ ವಿಧಾನಕ್ಕೆ ಒಳಪಡಿಸಿರುವುದರಿಂದ ದೂರುಗಳ ಶೀಘ್ರ ಮತ್ತು ನಿಖರ ವಿಲೇವಾರಿಯಾಗುತ್ತದೆ

. ದೂರುಗಳನ್ನು ಸೂಕ್ತವಾಗಿ ಅನುಕ್ರಮಗೊಳಿಸಲಾಗಿದ್ದು, ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಫೀರ್ಯಾದುದಾರರೊಂದಿಗೆ ನೇರವಾಗಿ ದೂರವಾಣಿ/ಇ-ಮೇಲ್ ಅಥವಾ ಖುದ್ದಾಗಿ ಸಂವಹಿಸಿ ಪ್ರಕರಣವನ್ನು ಇತ್ಯರ್ಥಗೊಳಿಸುತ್ತಾರೆ

. ಪ್ರಕರಣ ಪೂರ್ಣಗೊಳ್ಳುವವರೆಗೂ ದೂರಿನ ಸ್ಥಿತಿಯನ್ನು ಫೀರ್ಯಾದುದಾರನಿಗೆ ತಿಳಿಸಲಾಗುತ್ತದೆ

. ಪ್ರಕರಣವು ಕೊನೆಗೊಳ್ಳುವವರೆಗೂ ಅದರ ಬಗ್ಗೆ ನಿಗಾ ವಹಿಸಲಾಗುತ್ತದೆ

. ಪ್ರಕರಣವು ಕೊನೆಗೊಳ್ಳುವವರೆಗೂ ಅದರ ಬಗ್ಗೆ ನಿಗಾ ವಹಿಸಲಾಗುತ್ತದೆ

ವೀಡಿಯೋ

ನೊಂದಾಯಿಸಿದ ನಾಗರೀಕರ ಸಂಖ್ಯೆ:16

ದೂರವಾಣಿ ಕರೆಗಳ ದೂರುಗಳ ಸಂಖ್ಯೆ:21

ವೆಬ್ ಮೂಲಕ ದಾಖಲೆಯಾದ ದೂರುಗಳ ಸಂಖ್ಯೆ:14

ಮೊಬೈಲ್ ಮೂಲಕ ದಾಖಲಾದ ದೂರುಗಳ ಸಂಖ್ಯೆ:10

ಅಂಚೆ ಮೂಲಕ ದಾಖಲಾದ ದೂರುಗಳ ಸಂಖ್ಯೆ:2

ಒಟ್ಟು ದಾಖಲಾದ ದೂರುಗಳ ಸಂಖ್ಯೆ:49